ಕನ್ನಡ ಒಗುಟುಗಳು KANNADA RIDDLES


೧. ಹುಟ್ಟುವಾಗ ಕೆಂಪು
    ಕಣ್ಣಿಗೆ ತಂಪು
    ಏರಿದಾಗ ನೆತ್ತಿ ಕೆಂಡ
    ಇಳಿದಾಗ ಹೂವಿನ ಕುಂಡ
ಉತ್ತರ : ಸೂರ್ಯ


೨. ಹಸಿರು ಕೊಡದ ತುಂಬಾ ಸಿಹಿ ನೀರು.
ಉತ್ತರ : ಎಳನೀರು

೩. ಕೆರೆಗೆ ಮೂಳುಗ್ ಎಳ್ ಕಾಗೆ
    ದಡಕ್ಕೆ ಹತ್ ಕಾಗೆ
    ಮರಕ್ಕೆ ಹತ್ ಕಾಗೆ
    ಒಟ್ಟು ಎಷ್ಟು ಕಾಗೆ?
ಉತ್ತರ : ಒಂದೇ ಕಾಗೆ

೪. ಊರುಂಟು ಜನರಿಲ್ಲ
    ನದಿಯುಂಟು ನೀರಿಲ್ಲ
   ರಸ್ತೆಯುಂಟು ವಾಹನವಲ್ಲ
ಉತ್ತರ : ಭೂಪಟ (ಮ್ಯಾಪ್)

೫. ನೋಡುವವರು ಇಬ್ಬರು
    ಮಾಡುವವರು ಐವರು
   ತಿನ್ನುವವರು ಮುವತ್ತೆರೆಡು ಮಂದಿ
ಉತ್ತರ : ಕಣ್ಣು, ಬೆರಳು,ಹಲ್ಲುಗಳು

೬. ಮಾತು ಕೇಳಿಸಿದರು
     ಮುಖ ಕಾಣದು
    ಕಿವಿಗೆ ಹತ್ತಿರವಾದರು
    ಬಾಯಿಗೆ ದೂರ ! ನಾನಾರು
ಉತ್ತರ : ದೂರವಾಣಿ (ಟೆಲಿಫೋನ್)

೭. ರೆಕ್ಕೆಯುಂಟು ಹಕ್ಕಿಯಲ್ಲ
    ಸದ್ದುಂಟು ಗುಡುಗಲ್ಲ
    ಓಡುವೆನು ಮೊದವಲ್ಲ ! ನಾನಾರು
ಉತ್ತರ :


Rangoli using Plastic Stencil